ಗೋಡೆ-
ಒಂದು ಆವರಣದ ಸುತ್ತಲೂ, ಕೊಠಡಿಯ ಸುತ್ತಲೂ, ನಿವೇಶದ ಸುತ್ತಲೂ, ನಿರ್ಮಿಸಿದೆ; ವಿಭಾಜಕವಾಗಿಯೂ ಒಂದು ಎಲ್ಲೆಯಾಗಿಯೂ ನಿರ್ಮಿಸಿದ; ಛಾವಣಿಯನ್ನೂ ಮಹಡಿಯ ನೆಲವನ್ನೂ ಅವುಗಳ ಮೇಲೆರಗುವ ಭಾರಗಳನ್ನು ಹೋರಲೂ ನಿರ್ಮಿಸಿದ; ಛಾವಣಿಯ, ಸೇತುವೆಯ ಅಂಚುಗಳಲ್ಲಿ ಸುರಕ್ಷತೆಗಾಗಿ ನಿರ್ಮಿಸಿದ; ಸೇತುವೆಗಳ ಗುದ್ದುಗಗಳ ಎರಡೂ ಪಕ್ಕಗಳಲ್ಲೂ ಮಣ್ಣಿನ ಏರಿಯನ್ನು ರಕ್ಷಿಸಲು ನಿರ್ಮಿಸಿದ ನಿರ್ದಿಷ್ಟ ಉದ್ದದ ಲಂಬವಾದ ಕಟ್ಟಡಗಳು, ಗೋಡೆಗಳು. ಮಣ್ಣಿನ ಒತ್ತಡವನ್ನು ತಡೆಯುವವು ಆಸರೆ ಗೋಡೆಗಳು. ಗುದ್ದುಗದ ಪಕ್ಕದವು ಕಿಕ್ಕೆ ಗೋಡೆಗಳು. ಛಾವಣಿಯ, ಸೇತುವೆಯ ಅಂಚಿನಲ್ಲಿರುವುವು ಕೈಪಿಡಿ ಅಥವಾ ಪ್ಯಾರಾಪೆಟ್ ಗೋಡೆಗಳು. ಸಂದರ್ಭವನ್ನೂ ಪರಿಸರದ ಅನುಕೂಲತೆಗಳನ್ನೂ ಅನುಸರಿಸಿ ಗೋಡೆಯ ರಚನೆ ಕಲ್ಲು, ಮಣ್ಣು, ಸಿಮೆಂಟ್‍ಕಾಂಕ್ರಿಟ್, ಕಬ್ಬಿಣ, ಮರ ಮುಂತಾದ ವಸ್ತುಗಳಿಂದ ಆಗಬಹುದು. ಗೋಡೆಯ ಗಾತ್ರದ ನಿರ್ಧಾರ ಒಂದು ಎಂಜಿನಿಯರಿಂಗ್ ಸಮಸ್ಯೆ.  ಗೋಡೆಯ ಉದ್ದೇಶ, ಅದು ಭರಿಸಬೇಕಾದ ಹೊರೆ, ಪರಿಸರ ಹಾಗೂ ಲಭ್ಯವಸ್ತುಗಳು ಇವನ್ನು ಅವಲಂಬಿಸಿ ಈ ಸಮಸ್ಯೆಗೆ ಪರಿಹಾರವನ್ನು ಎಂಜಿನಿಯರುಗಳು ಒದಗಿಸುತ್ತಾರೆ.
(ನೋಡಿ- ಕಟ್ಟಡ)
 (ನೋಡಿ- ಗೃಹ)
 (ನೋಡಿ- ಗೃಹಾಲೇಖ್ಯ)							(ಜಿ.ಟಿ.ಜಿ.; ಕೆ.ಎಸ್.ಕೆ.; ಎಂ.ಆರ್.ಎಸ್.ಐ.)
(ಪರಿಷ್ಕರಣೆ: ಎಂ.ಜಿ.ಶ್ರೀನಿವಾಸನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ